main logo

ರಾಮಮಂದಿರದ 2 ಸಾವಿರ ಅಡಿಭಾಗದಲ್ಲಿರುತ್ತೆ ಟೈಮ್‌ ಕ್ಯಾಪ್ಸೂಲ್

ರಾಮಮಂದಿರದ 2 ಸಾವಿರ ಅಡಿಭಾಗದಲ್ಲಿರುತ್ತೆ ಟೈಮ್‌ ಕ್ಯಾಪ್ಸೂಲ್

ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ
ನವದೆಹಲಿ: ದೇಶದ ರಾಮಭಕ್ತರು ಕುತೂಹಲದಿಂದ ಕಾಯುತ್ತಿರುವ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನಗೆ ಆರಂಭವಾಗಿದೆ. ಈ ನಡುವೆ ಮಂದಿರ ಹಲವು ವಿಶಿಷ್ಟ ಲಕ್ಷಣ, ಆಚರಣೆಗೆ, ಒಗ್ಗೂಡುವಿಕೆಗೆ ಧ್ಯೋತಕವಾಗಿದೆ. ಇದೀಗ ಅಯೋಧ್ಯೆಯ ರಾಮ ಮಂದಿರದ ಭವ್ಯ ಕಟ್ಟಡದ ಕೆಳಗೆ, 2000 ಅಡಿಗಳಷ್ಟು ಆಳದಲ್ಲಿ ಒಂದು ʼಟೈಮ್‌ ಕ್ಯಾಪ್ಸೂಲ್ʼ ಅನ್ನು ಇರಿಸಲಾಗುತ್ತಿದ್ದು, ಇದು ರಾಮ ಜನ್ಮ ಭೂಮಿ ಭವ್ಯ ಇತಿಹಾಸವನ್ನು ಒಳಗೊಂಡಿರುವ ಮಾಹಿತಿ ಕೋಶವಾಗಿರಲಿದೆ ಎಂದು ಹೇಳಲಾಗಿದೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮ ಮಂದಿರದ ಅಡಿಯಲ್ಲಿ 2,000 ಅಡಿಗಳಷ್ಟು ಕೆಳಗೆ ‘ಟೈಮ್ ಕ್ಯಾಪ್ಸುಲ್’ ಅನ್ನು ಇರಿಸುತ್ತದೆ. ಟೈಮ್ ಕ್ಯಾಪ್ಸುಲ್ ರಾಮ ಜನ್ಮಭೂಮಿಯ ವಿವರವಾದ ಇತಿಹಾಸವನ್ನು ಹೊಂದಿರುತ್ತದೆ ಎನ್ನಲಾಗಿದೆ.

ಟ್ರಸ್ಟ್‌ನ ಸದಸ್ಯರ ಪ್ರಕಾರ, ಈ ಪ್ರದೇಶದ ಬಗ್ಗೆ ಭವಿಷ್ಯದಲ್ಲಿ ತಲೆದೋರಬಹುದಾದ ಯಾವುದೇ ವಿವಾದವನ್ನು ತಪ್ಪಿಸಲು ಮಾಹಿತಿ ತುಂಬಿದ ಈ ಕ್ಯಾಪ್ಸೂಲ್ ಅನ್ನು ಸೈಟ್‌ನ ಕೆಳಗೆ ಇರಿಸಲಾಗುತ್ತದೆ. ʼರಾಮ ಮಂದಿರ’ ಇತಿಹಾಸದ ವಿವಿಧ ಅಂಶಗಳನ್ನು ಇದು ಹೊಂದಿದೆ. ಇದೊಂದು ಐತಿಹಾಸಿಕ ಮಾಹಿತಿಯ ಸಂಗ್ರಹ. ಭವಿಷ್ಯದ ಜನತೆಯೊಂದಿಗೆ ಸಂವಹನದ ವಿಧಾನವಾಗಿ, ಭವಿಷ್ಯದ ಪುರಾತತ್ವಶಾಸ್ತ್ರಜ್ಞರು ಅಥವಾ ಇತಿಹಾಸಕಾರರಿಗೆ ಸಹಾಯ ಮಾಡಲು ಇದನ್ನು ಬಳಸಲಾಗುತ್ತದೆ.
ಟೈಮ್‌ ಕ್ಯಾಪ್ಸೂಲ್‌ ಸಹಾಯದಿಂದ ಭವಿಷ್ಯದ ಪೀಳಿಗೆಗಳು ಈಗಿನ ನಿರ್ದಿಷ್ಟ ಯುಗ, ಸಮಾಜ ಮತ್ತು ದೇಶದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಸಾಮಾನ್ಯವಾಗಿ, ಈ ಟೈಮ್‌ ಕ್ಯಾಪ್ಸೂಲ್‌ಗಳನ್ನು ಕಟ್ಟಡಗಳ ಅಡಿಪಾಯದಲ್ಲಿ ಇರಿಸಲಾಗುತ್ತದೆ. ಸದ್ಯ ಈ ಟೈಮ್ ಕ್ಯಾಪ್ಸೂಲ್ ಅಯೋಧ್ಯೆ, ಭಗವಾನ್ ರಾಮನ ಬಗ್ಗೆ ಸಂದೇಶವನ್ನು ಸಂಸ್ಕೃತದಲ್ಲಿ ಹೊಂದಿರುತ್ತದೆ. ಇದನ್ನು ತಾಮ್ರದ ತಗಡಿನಲ್ಲಿ ಕೆತ್ತಿ ಅದನ್ನು ಸುರಕ್ಷಿತವಾದ, ತುಕ್ಕು ಹಿಡಿಯದ, ಶಿಲೆಯ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಟೈಮ್‌ ಸಮಯ ಕ್ಯಾಪ್ಸೂಲ್ ಅನ್ನು ಭೂಮಿ ಪೂಜೆಯ ದಿನ ಅಥವಾ ಪ್ರಾಣ ಪ್ರತಿಷ್ಠಾಪನೆಯ ದಿನ ಇರಿಸಲಾಗುವುದಿಲ್ಲ. ಏಕೆಂದರೆ ಅದು ಸಿದ್ಧವಾಗಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಠ ಪದಗಳಲ್ಲಿ ಹೆಚ್ಚಿನ, ನಿಖರ ಮಾಹಿತಿಯನ್ನು ಬರೆಯಲು ತಜ್ಞರನ್ನು ಸಂಪರ್ಕಿಸಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!