main logo

‘ಪೂಜಿಸಲೆಂದೆ ಹೂಗಳ ತಂದೆ ಹಾಡು ಹಾಡಿ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರರಾದ ಶಿವಶ್ರೀ ಯಾರು ಗೊತ್ತಾ?

‘ಪೂಜಿಸಲೆಂದೆ ಹೂಗಳ ತಂದೆ ಹಾಡು ಹಾಡಿ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರರಾದ ಶಿವಶ್ರೀ ಯಾರು ಗೊತ್ತಾ?

ರಾಜ್​ಕುಮಾರ್ ಹಾಗೂ ಕಲ್ಪನಾ ನಟನೆಯ ‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೆ ಹೂಗಳ ತಂದೆ..’ ಈಗಲೂ ಅನೇಕರ ಫೇವರಿಟ್ ಹಾಡುಗಳಲ್ಲಿ ಒಂದು. ಈ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ತಮ್ಮದೇ ಶೈಲಿಯಲ್ಲಿ ಹಾಡಿ ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಹಾಡಿನ ಲಿಂಕ್​ನ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಹಾಡಿನ ಬಗ್ಗೆ ಹಾಗೂ ಶಿವಶ್ರೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಶ್ರೀ ಯಾರು ಎನ್ನುವ ಹುಡುಕಾಟ ಆರಂಭ ಆಗಿದೆ

ಶಿವಶ್ರೀ ಹಾಡಿರುವ ಸಾಂಗ್​ನ ವಿಡಿಯೋ ಲಿಂಕ್​ನ ಟ್ವಿಟರ್​ನಲ್ಲಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶಿವಶ್ರೀ ಪ್ರಯತ್ನವನ್ನು ಮೆಚ್ಚಿದ್ದಾರೆ. ಈ ಟ್ವೀಟ್​ನ ರೀಟ್ವೀಟ್ ಮಾಡಿಕೊಂಡಿರುವ ಶಿವಶ್ರೀ ಅವರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಿವಶ್ರೀ ಅವರು ಅನೇಕ ಹಾಡುಗಳನ್ನು ಈವರೆಗೆ ಹಾಡಿದ್ದಾರೆ.

ಶಿವಶ್ರೀ ಅವರು ಕಲಾವಿದರ ಕುಟುಂಬದಿಂದಲೇ ಬಂದವರು. ಹೀಗಾಗಿ, ಅವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಒಲವು ಇತ್ತು. ಶಾಸ್ತ್ರೀಯ ಸಂಗೀತ, ಭರತನಾಟ್ಯವನ್ನು ಅವರು ಕಲಿತಿದ್ದಾರೆ. ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ.

ಶಿವಶ್ರೀ ಅವರ ಸಹಜ ಪ್ರತಿಭೆ, ಕುಟುಂಬದ ಪ್ರೋತ್ಸಾಹ, ಕಠಿಣ ಪರಿಶ್ರಮ ಮತ್ತು ಶಾಸ್ತ್ರೀಯ ಕಲೆಗಳಲ್ಲಿ ತೋರಿದ ಉತ್ಸಾಹದಿಂದ ವೃತ್ತಿಪರ ಕಲಾವಿದೆಯಾಗಿ ಬೆಳೆಯಲು ಸಹಕಾರಿ ಆಯಿತು. ಶಿವಶ್ರೀ ಅವರು ಬಯೋ-ಇಂಜಿನಿಯರಿಂಗ್ ಪದವೀಧರೆ ಆಗಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!