ಮಂಗಳೂರು: ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ 1953 ಸೆಪ್ಟಂಬರ್ 27 ರಂದು ಜನಿಸಿದ ಅವರು. ಇವರ ತಂದೆ ಮುಂಬೈಯಲ್ಲಿ ಜರ್ಮನ್ ರಾಯಭಾರಿ ಕಚೇರಿಯ ಒಬ್ಬ ಅಧಿಕಾರಿಯ ವಾಹನ ಚಾಲಕರಾಗಿದ್ದರು. ಇವರು ಶಾಲಾ ಶಿಕ್ಷಣ ಪಡೆದಿರದಿದ್ದರೂ, ಕುತೂಹಲ ಮತ್ತು ಸ್ವಪ್ರಯತ್ನದಿಂದ 12 ಭಾಷೆಗಳನ್ನು ಕಲಿತಿದ್ದರು. ಅಮೃತರ ತಾಯಿ ಗೃಹಿಣಿಯಾಗಿದ್ದರೂ, ಮಲೆಯಾಳ ಜನಪದ ಕಥನ ಕಾವ್ಯಗಳನ್ನು ಹಾಡಬಲ್ಲವರಾಗಿದ್ದರು.