ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಪ್ರತಿಭಾವಂತ ಕಲಾವಿದ
ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ದುರಂತ
ಪುಂಜಾಲಕಟ್ಟೆ: ಪ್ರತಿಭಾವಂತ ಯುವ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ.ಬೇಬಿ ಅವರ ಪುತ್ರ ಗೌತಮ್ (26) ಮೃತಪಟ್ವರಾಗಿದ್ದಾರೆ. ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಡಿ.30 ರಂದು ಬೆಳುವಾಯಿಯಲ್ಲಿ ನಾಟಕ ಮುಗಿಸಿ ತಡರಾತ್ರಿ ಸುಮಾರು 3ಗಂಟೆಯ ಹೊತ್ತಿಗೆ ಮನೆಗೆ ಹಿಂತಿರುಗುತ್ತಿರುವಾಗ ಅವರ ಸ್ಕೂಟರ್ ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿಯಾಗಿ ಗೌತಮ್ ಅವರ ತಲೆಗೆ ಏಟಾಗಿ ರಸ್ತೆಗೆ ಬಿದ್ದಿದ್ದರು. ಬೆಳಗ್ಗೆಯಷ್ಟೆ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಅವಿವಾಹಿತರಾಗಿದ್ದ ಅವರು ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಾಯಿ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.