ನವದೆಹಲಿ: ಸ್ವಿಗ್ಗಿ ತನ್ನ 2023ನೇ ಸಾಲಿನ ಅಂಕಿ & ಅಂಶ ಬಿಡುಗಡೆ ಮಾಡಿ, ಯಾವ ವಸ್ತುನ ಹೆಚ್ಚು ಜನರು ಆರ್ಡರ್ ಮಾಡಿದ್ದಾರೆ ಅಂತಾ ತಿಳಿಸಿದೆ. ಆ ಪ್ರಕಾರ, ಸ್ವಿಗ್ಗಿ ಈಗ ಸೇವೆಯ ನೀಡುತ್ತಿರುವ 99 ವಸ್ತುಗಳ ಪೈಕಿ ಕಾಂಡೋಮ್ ಅನ್ನ ಜನರು ದಿನದಿಂದ ದಿನಕ್ಕೆ ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ವಿಗ್ಗಿ ನೀಡಿದ ಮಾಹಿತಿ ಪ್ರಕಾರ 2023ರ ಫೆಬ್ರವರಿ & ಸೆಪ್ಟೆಂಬರ್ ತಿಂಗಳಲ್ಲಿ ಜನ ಹೆಚ್ಚಾಗಿ ಕಾಂಡೋಮ್ ಆರ್ಡರ್ ಮಾಡಿದ್ದಾರಂತೆ. ಹೀಗೆ ಆ 2 ತಿಂಗಳು ಕಾಂಡೋಮ್‌ಗೆ ಭಾರಿ ಡಿಮ್ಯಾಂಡ್ ಇತ್ತು ಅನ್ನುತ್ತಿದೆ ಸ್ವಿಗ್ಗಿ ಅಂಕಿ ಅಂಶ.
ಕಾಂಡೋಮ್ ಬಳಸುವ ನಂ. 1 ದೇಶ? ಇನ್ನು ಜಗತ್ತಿನಲ್ಲೇ ಅತಿಹೆಚ್ಚು ಕಾಂಡೋಮ್ ಬಳಸುವ ದೇಶಗಳ ಪಟ್ಟಿ ನೋಡುವುದಾದ್ರೆ, ಭಾರತ 5ನೇ ಸ್ಥಾನದಲ್ಲಿ ಇದೆ. ಹಾಗೇ 1ನೇ ಸ್ಥಾನದಲ್ಲಿ ಅಮೆರಿಕ ಇದ್ದರೆ, 2ನೇ ಸ್ಥಾನಕ್ಕೆ ಯುನೈಟೆಡ್ ಕಿಂಗ್‌ಡಮ್ ಅಂದ್ರೆ ಯುಕೆ ತೃಪ್ತಿಪಟ್ಟುಕೊಂಡಿದೆ. ಹಾಗೇ 3ನೇ ಸ್ಥಾನದಲ್ಲಿ ಜಪಾನ್ ಇದ್ದು, 4ನೇ ಸ್ಥಾನ ಚೀನಾ ಪಾಲಾಗಿದೆ. ಇಷ್ಟೂ ದೇಶಗಳು ಜಗತ್ತಿನಲ್ಲೇ ಅತಿಹೆಚ್ಚು ಕಾಂಡೋಮ್ ಬಳಸುವ ಜನರನ್ನ ಹೊಂದಿರುವ ರಾಷ್ಟ್ರಗಳಾಗಿವೆ. ಭಾರತದಲ್ಲಿ ಕೂಡ ಈ ವ್ಯತ್ಯಾಸ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಕಾಣುತ್ತಿದೆ. ಹೀಗೆ ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.