ಉಡುಪಿ: ಮದುವೆ ಮಂಟಪದಲ್ಲೇ ಮಧು ಹಾಗೂ ವರ ಕೋಳಿ ಅಂಕ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಬ್ರಹ್ಮಾವರದಲ್ಲಿ ನಡೆದ ಈ ಡಿಫರೆಂಟ್ ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಿಥುನ್ ಮತ್ತು ಪೂಜಾ ಈ ಡಿಫರೆಂಟ್ ಮದುವೆಯ ವಧು ವರರು.
ಜೆಸಿಬಿಯಲ್ಲಿ ಕುಳಿತು ಮದುವೆ ಹಾಲ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವಧು ವರರು, ಮದುವೆ ಮಂಟಪದಲ್ಲೆ ಪರಸ್ಪರ ಹುಂಚಗಳನ್ನು ಕಾಳಗಕ್ಕೆ ಬಿಡುವ ಮೂಲಕ ಕೋಳಿ ಅಂಕ ಆಡಿದ್ದಾರೆ. ವಧು ಹಾಗೂ ವರ ಕೋಳಿ ಅಂಕ ಆಡುವ ವಿಡಿಯೋ ಸಖತ್ ವೈರಲ್ ಆಗಿದೆ.
