ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿರುವ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ ತೃಪ್ರಿ ದಿಮ್ರಿ ಅವರು ತುಂಬು ಬಟ್ಟೆ ತೊಟ್ಟಿದ್ದಕ್ಕಿಂತ ತುಂಡುಡುಗೆ ತೊಟ್ಟಿದ್ದೇ ಅಧಿಕವಾಗಿದೆ. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಸಿಗದ ನಟಿಗೆ, ರಣಬೀರ್ ಜೊತೆಗಿನ ‘ನ್ಯೂಡ್ ಸೀನ್’ ನಂತರ ಪಡ್ಡೆಗಳ ಲೇಟೆಸ್ಟ್ ಕ್ರಶ್ ಆಗಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ತೃಪ್ತಿ ಮಾತನಾಡಿದ್ದಾರೆ. ನನ್ನ ಪೋಷಕರು ಅಂಥಾ ಸೀನ್ನಲ್ಲಿ ನನ್ನನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಇಂತಹದನ್ನು ನಾವು ಚಲನಚಿತ್ರಗಳಲ್ಲಿ ನೋಡಿಲ್ಲ. ಆದರೆ ನೀನು ಅದನ್ನು ಮಾಡಿದ್ದಿ’ ಎಂದು ಹೇಳಿದರು. ಆ ದೃಶ್ಯವನ್ನು ನಾನು ಮಾಡಿದ್ದೇನೆಂದು ಅರಗಿಸಿಕೊಳ್ಳಲು ಅವರಿಗೆ ಬಹಳ ಸಮಯ ಬೇಕಾಯಿತು’ ಎಂದು ತೃಪ್ತಿ ದಿಮ್ರಿ ತಿಳಿಸಿದ್ದಾರೆ.
ನಾನು ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇದು ನನ್ನ ಕೆಲಸ ಮತ್ತು ಇದರಲ್ಲಿ ನಾನು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತೇನೆ. ಅದರಲ್ಲಿ ಯಾವುದೇ ಸಮಸ್ಯೆಯನ್ನು ಕಾಣುವುದಿಲ್ಲ. ನಾನು ನಟಿ, ಹೀಗಾಗಿ ನಿರ್ವಹಿಸುವ ಪಾತ್ರದೊಂದಿಗೆ ನಾನು 100 ಪ್ರತಿಶತ ಪ್ರಾಮಾಣಿಕವಾಗಿರಬೇಕು ಮತ್ತು ನಾನು ಅದನ್ನು ಮಾಡಿದ್ದೇನೆ ಎಂದು ತಿಳಿಸಿದ್ದೇನೆ’ ಎಂದು ತೃಪ್ತಿ ಹೇಳಿದ್ದಾರೆ.