ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರ ಡೀಪ್ಫೇಕ್ AI ಫೋಟೋಗಳು ಮತ್ತು ವೀಡಿಯೊಗಳು ಭಾರೀ ವೈರಲ್ ಆಗುತ್ತಿದ್ದು, ಇದೀಗ ಪ್ರಸಿದ್ಧ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಡೀಪ್ಫೇಕ್ ಹರಿದಾಡುತ್ತಿದೆ.
ಈ ವೈರಲ್ ಫೋಟೋದಲ್ಲಿ, ಶುಭಮನ್ ಗಿಲ್ ಮತ್ತು ಸಾರಾ ಇಬ್ಬರು ಕುಳಿತು ಒಟ್ಟಿಗೆ ಸಮಯ ಕಳೆಯುತ್ತಿರುವ ಕಂಡುಬಂದಿದೆ. ಈ ಚಿತ್ರ ಡೀಪ್ಫೇಕ್ ಅಂತ ತಿಳಿದುಬಂದಿದೆ. ಅಲ್ಲದೆ, ಸಾರಾ ತೆಂಡೂಲ್ಕರ್ ಅವರ ನಕಲಿ ಎಕ್ಸ್ ಖಾತೆಯ ಪ್ರಕರಣವೂ ಸಹ ಬೆಳಕಿಗೆ ಬಂದಿದ್ದು, ಈ ಕುರಿತು ಪ್ರತಿಕ್ರಿಯಿಸಿ, ಸಂಪೂರ್ಣ ವಿಷಯದ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿಕೊಂಡು ಬೇಸರ ವ್ಯಕ್ತಪಡಿಸಿರುವ ಸಾರಾ, ‘ನಮ್ಮೆಲ್ಲರಿಗೂ ಸಂತೋಷ, ದುಃಖ ಮತ್ತು ನಮ್ಮ ದೈನಂದಿನ ದಿನಚರಿಯನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಉತ್ತಮ ಸ್ಥಳವಾಗಿದೆ. ಆದರೆ, ಅಂತರ್ಜಾಲದಲ್ಲಿ ತಂತ್ರಜ್ಞಾನದ ದುರುಪಯೋಗವನ್ನು ನೋಡಿದ್ರೆ ಶಾಕ್ ಆಗುತ್ತಿದೆ. ಸತ್ಯಕ್ಕೆ ದೂರವಿರುವ ನನ್ನ ಕೆಲವು ನಕಲಿ ಫೋಟೋಗಳನ್ನು ನಾನು ನೋಡಿದ್ದೇನೆ ಎಂದು ಡೀಪ್ಫೇಕ್ ಚಿತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರ ಅವರು X ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ ಮತ್ತು ಅವರ
ಹೆಸರಿನಲ್ಲಿರುವ ನಕಲಿ ಖಾತೆಗಳನ್ನು ತನಿಖೆ ಮಾಡಿ, ಅವುಗಳನ್ನು ಅಮಾನತುಗೊಳಿಸಬೇಕು ಎಂದು ಹೇಳಿದ್ದಾರೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ರೀತಿ ಕೃತ್ಯ ಮಾಡಲಾಗುತ್ತಿದೆ ಎಂದು ಸಾರಾ ಅಭಿಪ್ರಾಯ ಪಟ್ಟಿದ್ದಾರೆ.