main logo

ಮದುವೆ ಒಮ್ಮೆ ಮಾತ್ರ ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು ಏನಂತೀರಿ

ಮದುವೆ ಒಮ್ಮೆ ಮಾತ್ರ ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು ಏನಂತೀರಿ

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಹೋದಲ್ಲಿ ಬಂದಲ್ಲೆಲ್ಲ ಅವರ ಅಭಿಮಾನಿಗಳು ಪ್ರೀತಿ ತೋರುತ್ತಾರೆ. ಯುವಕನೊಬ್ಬ ತನ್ನ ವಿವಾಹ ದಿನಂದಂದು ಪ್ರಧಾನಿ ಮೋದಿ ಅವರ ಪುತ್ಥಳಿ ನಿರ್ಮಿಸಿ ಅದನ್ನು ಮದುವೆ ಮಂಟಪದಲ್ಲಿರಿಸಿ ಯುವಕನೊಬ್ಬ ಅಭಿಮಾನ ಮೆರೆದಿದ್ದಾನೆ. ಶಿಶಿಲದ ತಿಲಕ್ ಎಂಬ ಯುವಕ ತನ್ನ ಮದುವೆಯ ಸಮಾರಂಭದಲ್ಲಿ ಮೋದಿಯ ಪುತ್ಥಳಿಯನ್ನು ನಿರ್ಮಿಸಿ , ಕಲ್ಯಾಣಮಂಟಪದ ಮುಂದಿರಿಸಿ, ಅದರ ಕೆಳಗೆ, ‘ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು, ಏನಂತೀರಿ?’ ಎಂದು ಬರೆಸಿದ್ದಾನೆ. ಅಲ್ಲದೆ ಪ್ರಧಾನಿ ಮೋದಿಯವರ ಕಾರ್ಯಗಳ ಕುರಿತು ಭಿತ್ತಿಪತ್ರಗಳನ್ನು ಪ್ರಚಾರ ಕೈಗೊಂಡಿದ್ದಾನೆ. ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು, ಶಾಸಕ ಹರೀಶ್‌ ಪೂಂಜ ಕೂಡ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!