ದೀಪಾವಳಿ ಆಚರಣೆಗೆ ಉಡುಪಿ ನಗರಸಭೆ ಒತ್ತು ನೀಡಿದೆ. ಹಸಿರು ಪಟಾಕಿ ಕುರಿತು ಜಾಗೃತಿ ಮೂಡಿಸಿ ಕೆಲವೊಂದು ಸ್ಥಳಗಳನ್ನು ನಿಗದಿಪಡಿಸಿ ಪಟಾಕಿ ಮಾರಾಟಕ್ಕೆ ಸೀಮಿತ ಅವಕಾಶ ಕಲ್ಪಿಸಿದೆ. ಮರಳು ಶಿಲ್ಪದ ಮೂಲಕ ನಗರಸಭೆಯ ಆಯೋಜನೆಯಲ್ಲಿ ಮಲ್ಪೆ ಬೀಚ್ನಲ್ಲಿ ದೀಪಾವಳಿ, ಶುಭ ದೀಪಾವಳಿ ಜನ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಸಕ ಯಶ್ಪಾಲ್ ಸುವರ್ಣ ಜನಜಾಗೃತಿಗೊಳಿಸುವ ಮರಳು ಶಿಲ್ಪವನ್ನು ಹಣತೆಯ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರ ಶಿಸ್ತುಬದ್ಧವಾಗಿ ದೀಪವಾಳಿಯನ್ನು ಆಚರಿಸಬೇಕೆಂಬ ಉದ್ದೇಶದಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಆಚರಿಸಲು ನಿರ್ಧರಿಸಿದೆ. ಮಲ್ಪೆ ಭಾಗದ ಕರಾವಳಿಯ ತೀರಕ್ಕೆ ಬರುವ ಎಲ್ಲ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಮರಳು ಶಿಲ್ಪ ರಚನೆ ಮಾಡಿದೆ. ದೇಶದ ಎಲ್ಲ ಜನರು ಪರಿಸರ ಮಾಲಿನ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಪೌರಾಯುಕ್ತ ರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.