ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ತನ್ನ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ. ಇಂಟರ್ವ್ಯೂ ಇತ್ತೆಂದು ಬೆಳಗ್ಗೆ 6.30ಕ್ಕೆ ಮನೆ ಬಿಟ್ಟಿದ್ದಳು, ಆರೋಪಿಯನ್ನು ಆಕೆ ಪ್ರೀತಿಸುತ್ತಿದ್ದಳು, ಕೆಲವು ದಿನದಿಂದ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈ ಕೋಪದಿಂದ ಮಹಿಳೆಯ ಮುಖ, ತೊಡೆ ಸೇರಿದಂತೆ ಹಲವೆಡೆ 13 ಬಾರಿ ಇರಿದಿದ್ದಾನೆ. ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಯುವತಿಯ ತಾಯಿ ಶಕುಂತಲಾ ಮಾತನಾಡಿ, ಮಗಳು ಲಜಪತ್ನಗರದಲ್ಲಿ ಇಂಟರ್ವ್ಯೂಗೆಂದು ಹೋಗುತ್ತಿದ್ದಳು, ಕ್ಯಾಬ್ನಲ್ಲಿ ಯುವಕ ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾರೆ. ಆಫೀಸ್ಗೆ ಹೋಗಲು ತಡವಾಗುತ್ತಿದೆ, ಮತ್ತೆ ನಿನ್ನೊಂದಿಗೆ ಮಾತನಾಡಲು ನನಗೆ ಇಷ್ಟವೂ ಇಲ್ಲ ಎಂದು ಎಷ್ಟೇ ಹೇಳಿದರೂ ಕ್ಯಾಬ್ನಲ್ಲಿ ಕುಳಿತುಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದ, ಕುಳಿತುಕೊಂಡ ಬಳಿಕ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಕಳೆದ 2 ವರ್ಷಗಳಿಂದ ಪ್ರೀತಿ ಮಾಡುವಂತೆ ಆಕೆಯನ್ನು ಪೀಡಿಸುತ್ತಿದ್ದ ಎಂದು ದೂರಿದ್ದಾಳೆ.
ಆಕೆ ಆ ಯುವಕನನ್ನು ಪ್ರೀತಿ ಮಾಡಿಲ್ಲ, ಮನೆಯಲ್ಲಿ ತಂದೆ ಇಲ್ಲದ ಕಾರಣ ನಮ್ಮೆಲ್ಲರ ಜವಾಬ್ದಾರಿ ಆಕೆಯ ಮೇಲಿದೆ, ಕೋರ್ಟ್ ಮ್ಯಾರೇಜ್ ಆಗೋಣ ಎಂದು ಆತ ಕೇಳಿದ್ದ ಆದರೆ ಆಕೆ ಒಪ್ಪಿರಲಿಲ್ಲ. ಕ್ಯಾಬ್ ಚಾಲಕನೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ಇಬ್ಬರು ಒಂದೇ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿದ್ದರು.