ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಪರಸ್ಪರ ಪ್ರೀತಿಸಿ ಮದುವೆ ಆದವರು. ನಾಲ್ಕು ವರ್ಷ ಕಳೆಯುವುದರೊಳಗೆ ಇವರ ಡಿವೋರ್ಸ್ ಪಡೆದುಕೊಂಡರು. ಇಬ್ಬರೂ 2021ರ ಅಕ್ಟೋಬರ್ನಲ್ಲಿ ಬೇರೆ ಆದರು. ಈ ಘಟನೆ ನಡೆದು ಎರಡು ವರ್ಷ ಕಳೆದಿದೆ. ಆದಾಗ್ಯೂ ಇವರ ಕುರಿತ ಚರ್ಚೆ ಕಡಿಮೆ ಆಗಿಲ್ಲ. ಈಗ ಸಮಂತಾ ಅವರ ಟ್ಯಾಟೂ ವಿಚಾರ ಚರ್ಚೆಗೆ ಬಂದಿದೆ. ಅವರು ಹೊಟ್ಟೆಗಿಂತ ಮೇಲಿದ್ದ ಟ್ಯಾಟೂನ ಅಳಿಸಿ ಹಾಕಿದ್ದಾರೆ. ಅವರ ದೇಹದ ಮೇಲೆ ಹಲವು ಹಚ್ಚೆಗಳಿವೆ. ಅವರ ಮಾಜಿ ಪತಿಯ ಸಹಿಯ ಟ್ಯಾಟೂ ಕೂಡ ಇತ್ತು. ವಿಚ್ಛೇದನ ಪಡೆದ ಹೊರತಾಗಿಯೂ ಸಮಂತಾ ಟ್ಯಾಟೂನ ಹಾಗೆಯೇ ಇಟ್ಟುಕೊಂಡಿದ್ದರು. ಆದರೆ, ಈಗ ಅದನ್ನು ಅವರು ತೆಗೆದು ಹಾಕಿದ್ದಾರೆ.
ನಟಿ ಸಮಂತಾ ದೇಹದ ಮೇಲೆ ಮೂರು ಟ್ಯಾಟೂ ಇತ್ತು. ವೈಎಂಸಿ ಎಂಬ ಟ್ಯಾಟೂ ಬೆನ್ನಿನ ಭಾಗದಲ್ಲಿ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’ ಎಂದು. ಸಮಂತಾ ಅವರನ್ನು ಸ್ಟಾರ್ ಆಗಿ ಮಾಡಿದ ಸಿನಿಮಾ ಇದು. ಅದರ ನೆನಪಿಗೆ ಸಮಂತಾ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬು ಸಮೀಪ ನಾಗ ಚೈತನ್ಯ ಅವರ ಸಹಿಯ ಟ್ಯಾಟೂ ಇತ್ತು. ಇದನ್ನು ಸಮಂತಾ ತೆಗೆಸಿದ್ದಾರೆ.