main logo

ನಟ ಶಿವರಾಜ್ ಕುಮಾರ್, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸಲ್ಲ ಎಂದು ತಮಿಳು ನಟ

ನಟ ಶಿವರಾಜ್ ಕುಮಾರ್, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸಲ್ಲ ಎಂದು ತಮಿಳು ನಟ

ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್, ಪ್ರಕಾಶ್ ರಾಜ್  ಎಂದು ತಮಿಳು ನಟ ಸಿದ್ದಾರ್ಥ್ ಹೇಳಿದ್ದಾರೆ.

ಸಿದ್ದಾರ್ಥ್ ನಟನೆಯ ‘ಚಿಕ್ಕು’ ಸಿನಿಮಾದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಅಡ್ಡಿಪಡಿಸಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ್ದರು.

ಈ ವಿಚಾರ ಹಿನ್ನೆಲೆ ಪ್ರಕಾಶ್ ರಾಜ್ ಹಾಗೂ ಶಿವರಾಜ್​ಕುಮಾರ್ ಅವರು ಸಿದ್ದಾರ್ಥ್​ಗೆ ಕ್ಷಮೆ ಕೇಳಿದರು. ಈ ಕುರಿತು ಸಿದ್ದಾರ್ಥ್ ಮಾತನಾಡಿದ್ದಾರೆ. ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಇದು ಅವರಿಂದ ಆದ ದೋಷ ಕೂಡ ಅಲ್ಲ. ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ. ಆದರೂ ಅವರು ಸಾರಿ ಎಂದರು. ಇದಕ್ಕೆ ಅವರ ಉದಾರ ಹೃದಯವೇ ಕಾರಣ. ಇದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಸಿದ್ದಾರ್ಥ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!