ಉತ್ತರ ಪ್ರದೇಶ: ವಿವಾಹಿತ ಮಹಿಳೆಯ ಮೇಲೆ ಬಾವ ಮತ್ತು ಆತನ ನಾಲ್ವರು ಸ್ನೇಹಿತರು ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆ ಬಸ್ರೇಹರ್ ಪ್ರದೇಶದಲ್ಲಿ ನಡೆದಿದೆ.
33 ವರ್ಷದ ಸಂತ್ರಸ್ತ ಮಹಿಳೆ ಇತ್ತೀಚೆಗೆ ತನ್ನ ಗಂಡನಿಂದ ಬೇರ್ಪಟ್ಟು ತನ್ನ ಬಾವನ ಜೊತೆ ವಾಸವಾಗಿದ್ದಳು. ಆದರೆ ಕಳೆದ ಮಂಗಳವಾರ ಸಂತ್ರಸ್ತ ಮಹಿಳೆ ಬಂದು ತನ್ನ ಅಕ್ಕನ ಮನೆಯಲ್ಲಿ ವಾಸವಿದ್ದಕ್ಕೆ ಆಕೆಯ ಗಂಡ ಹಸ್ತಕ್ಷೇಪ ಮಾಡಿದ್ದಾನೆ. ಆಕೆ ಇಲ್ಲಿರುವುದು ಬೇಡವೇ ಬೇಡ ಎಂದು ಜಗಳ ತೆಗೆದಿದ್ದಾನೆ.ಆಗ ಸಂತ್ರಸ್ತ ಮಹಿಳೆಯ ಬಾವ ಬೈಕ್‌ನಲ್ಲಿ ಬಂದು ಆಕೆಯನ್ನು ಡ್ರಾಪ್ ಕೊಡೋದಾಗಿ ಕರೆದುಕೊಂಡು ಹೋಗಿದ್ದಾನೆ. ಮನೆ ತಲುಪುವದಕ್ಕೂ ಮುನ್ನ ಮಾರ್ಗ ಮದ್ಯೆ ಸಂತ್ರಸ್ತ ಮಹಿಳೆಗೆ ಬಾವ ಮದ್ಯ ಕುಡಿಸಿದ್ದಾನೆ. ನಂತರ ಆಕೆಯನ್ನು ಬಾವ ಮನೆಗೆ ಕರೆದುಕೊಂಡು ಹೋಗಿದ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.