ಇಂದಿನಿಂದ ಆರಂಭವಾಗುವ ವಿಶ್ವಕಪ್ ಟೂರ್ನಿಗೆ ಆಗಮಿಸಿರುವ ಪಾಕಿಸ್ತಾನದ ತಂಡ, ಭಾರತದ ಆದರಾತಿಥ್ಯ ಸಂಪೂರ್ಣವಾಗಿ ಮೆಚ್ಚುಗೆಯಾಗಿದೆ ಎಂದು ಪಾಕಿಸ್ತಾನ ನಾಯಕ ಬಾಬರ್ ಅಜಾಮ್ ಹೇಳಿದರು.
ಅವರು ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಆಯೋಜಿಸುವ ಕ್ಯಾಪ್ಟನ್ಸ್ ಡೇ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ತಂಡದ ಬಗ್ಗೆ ಹಾಗೂ ಭಾರತದಲ್ಲಿ ಸಿಗುತ್ತಿರುವ ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಿಂದ ನಾವು ವಿದೇಶದಲ್ಲಿದ್ದಂತೆ ಅನಿಸಲಿಲ್ಲ. ಭಾರತಕ್ಕೆ ಹೋದಾಗ, ನಾನು ಒಂಟಿತನ ಅನುಭವಿಸುತ್ತೇನೆ ಎಂದು ಈ ಹಿಂದೆ ಭಾವಿಸಿದ್ದೆ, ಆದರೆ ಭಾರತದ ಜನರು ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ ಮತ್ತು ಮುಂದೆಯೂ ಅದೇ ಪ್ರೀತಿಯನ್ನು ನಾವು ಪಡೆಯುತ್ತೇವೆ ಎಂದು ನಾನು ಭಾವಿಸುತ್ತೇನೆ. ನನಗೆ ಹೈದರಾಬಾದ್ ಬಿರಿಯಾನಿ ಎಂದರೆ ತುಂಬಾ ಇಷ್ಟ ಎಂದು ಬಾಬರ್ ಹೇಳಿಕೊಂಡಿದ್ದಾರೆ.