ಪಡುಬಿದ್ರಿ: ಪಡುಬಿದ್ರಿ – ಕಾರ್ಕಳದ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿ ಟೋಲ್ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) 3 ವರ್ಷಗಳ ಅವಧಿಗೆ ಟೆಂಡರನ್ನು ಹಾಸನ – ಬೆಂಗಳೂರು ಮೂಲದ ರವಿ ಮೋಕ್ಷಿತ್ ಕಂಪೆನಿಗೆ ಖಾಯಂಗೊಳಿಸಿದೆ.
ಕಂಪೆನಿಯು ಕರಾರು ಪತ್ರಗಳ ಕೆಲಸ ಕಾರ್ಯಗಳನ್ನು ಮುಗಿಸಿ ಒಂದೆರಡು ತಿಂಗಳಲ್ಲಿ ಟೋಲ್ಗೇಟ್ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಹೆಜಮಾಡಿ ಟೋಲ್ನಲ್ಲಿರುವಂತೆ ಇಲ್ಲೂ ಪಡುಬಿದ್ರಿಯ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಒದಗಿಸುವುದಾಗಿ ಮೂಲಗಳು ತಿಳಿಸಿವೆ.