main logo

ಮದ್ಯ ಕುಡಿಯಲು ಹಣ ನೀಡದಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿದ ಮಗ

ಮದ್ಯ ಕುಡಿಯಲು ಹಣ ನೀಡದಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿದ ಮಗ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಶನಿವಾರ ಸಂಭವಿಸಿದೆ. ಮದ್ಯ ಕುಡಿಯಲು ಹಣ ನೀಡದಿದ್ದಕ್ಕೆ ಮಗ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ.

ಮೃತ ದುರ್ದೈವಿ ಕಮಲಮ್ಮ (56), ಕೆ. ಬಿದರೆ ಗ್ರಾಮದ ಸಂತೋಷ್ ಕೊಲೆ ಮಾಡಿದ ಆರೋಪಿ.

ಏನಿದು ಘಟನೆ: ಮದ್ಯದ ಅಮಲಿನಲ್ಲಿದ್ದ ಸಂತೋಷ್ ಮನೆಯಲ್ಲಿ ತಾಯಿ ಜತೆ ಜಗಳವಾಡಿದ್ದು, ಕುಪಿತಗೊಂಡು ತಾಯಿ ಕಮಲಮ್ಮಳ ಅವರ ಬಲಗೈಯನ್ನು ಬ್ಲೇಡ್‌ನಿಂದ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಸ್ಪಸ್ಥಗೊಂಡರು. ಕೂಡಲೇ ನೆರೆಹೊರೆಯವರು ಆಂಬ್ಯುಲೆನ್ಸ್‌ನಲ್ಲಿ ಸಿಂಗಟಗೆರೆ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಸಂತೋಷ್‌ನನ್ನು ಪಂಚನಹಳ್ಳಿ ಠಾಣೆ ಪಿಎಸ್‌ಐ ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!