ರೆಟ್ರೋ ಫ್ಯಾಶನ್ (Retro Fashion) ಹೆಸರಿನಲ್ಲಿ ಇದೀಗ ಮಾಡೆಲ್ ಲೋಕದಲ್ಲಿ (Model World) ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದು ಕೆಲವೊಮ್ಮೆ ಈ ಫೊಟೋಶೂಟ್ ಗಳು (Photo Shoot) ಅತಿರೇಕದ ಮಟ್ಟಕ್ಕೂ ಹೋಗುವುದಿದೆ.
ಈ ಹಿಂದೆಯೂ ತಮ್ಮ ‘ಪ್ರೈವೇಟ್ ಪಾರ್ಟ್ಸ್’ ಕಾಣಿಸದಂತೆ ಬಟ್ಟೆಗಳೇ ಇಲ್ಲದೆ ಕೇವಲ ಆಭರಣಗಳನ್ನು ಧರಿಸಿ ನಡೆಸಿದ್ದ ಫೊಟೋ ಶೂಟ್, ಬೇಬಿ ಬಂಪಿಂಗ್ ಹೆಸರಿನಲ್ಲಿ ನಡೆಸುವ ಕೆಲವೊಂದು ಮೈ ಕಾಣಿಸುವ ರೀತಿಯ ಫೊಟೋ ಶೂಟ್ ಗಳು ಇನ್ ಸ್ಟಾಗ್ರಾಂ ನಲ್ಲಿ ಟ್ರೆಂಡಿಂಗ್ ಆಗುವುದರ ಜೊತೆಗೆ ಒಂದಷ್ಟು ವಿವಾದಕ್ಕೂ ಕಾರಣವಾಗಿತ್ತು.
ಇದೀಗ, ಮಾಲಿವುಡ್ ನಟಿ ಜಾನಕಿ ಸುಧೀರ್ (Janaki Sudheer) ಅವರು ಕೇವಲ ಆಭರಣಗಳಿಂದಲೇ ತನ್ನ ದೇಹದ ಮೇಲ್ಭಾಗವನ್ನು ಮುಚ್ಚಿಕೊಂಡು ಮಾಡಿಸಿಕೊಂಡಿರುವ ಫೊಟೋ ಶೂಟ್ ಒಂದು ಇದೀಗ ಎಲ್ಲೆಡೆ ‘ಟಾಕ್’ ಆಗಿದೆ.
26 ವರ್ಷದ ಈ ಹಾಟ್ ನಟಿ ಮಲಯಾಳಂನ (Malayalam) ಎರಡು ಚಿತ್ರಗಳಲ್ಲಿ ನಟಿಸಿದ್ದು, ತೆಲುಗು (Telugu) ಚಿತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
2022ರಲ್ಲಿ ಬಿಗ್ ಬಾಸ್ ನ (Big Boss) ಮಲಯಾಂಳ ಆವೃತ್ತಿಯ ಸೀಸನ್ -4ರಲ್ಲಿ ಜಾನಕಿ ಸುಧೀರ್ ಸ್ಪರ್ಧಿಯಾಗಿದ್ದರು. ಆದರೆ ಚಿತ್ರರಂಗದಲ್ಲಿ ಇನ್ನೂ ಕ್ಲಿಕ್ ಆಗದ ಜಾನಕಿ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟಿವ್ ಆಗಿದ್ದಾರೆ.
ಇದೀಗ ಈ ನಿರ್ವಸ್ತ್ರ ಸುಂದರಿಯ ‘ಆಭರಣ’ ಧರಿಸಿದ ಫೊಟೋ ಸಖತ್ ಟ್ರೆಂಡಿಂಗ್ ನಲ್ಲಿದ್ದು ಅವುಗಳ ಕೆಲ ಸ್ಯಾಂಪಲ್ಸ್ ಇಲ್ಲಿದೆ ನೋಡಿ.