ಚಿತ್ರದುರ್ಗ: ದಾಖಲೆ ಇಲ್ಲದೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 8 ಕೋಟಿ ರೂ. ಹಣವನ್ನು ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಬಳಿ ಇನೋವಾ ಕಾರಿನಲ್ಲಿ ತೆರಳುತಿದ್ದ ಚಾಲಕ ಸಚಿನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾರಿನಲ್ಲಿ ತಂಬಾಕು ಚೀಲಗಳಲ್ಲಿ ತುಂಬಲಾಗಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಹಣ ಚಿತ್ರದುರ್ಗದ ಅಡಿಕೆ ವರ್ತಕರಿಗೆ ಸೇರಿದ್ದು ಎಂಬ ಅನುಮಾನವಿದ್ದು, ಖಚಿತ ಮಾಹಿತಿಗಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಲಾಗಿದೆ. ವಿಚಾರಣೆ ಬಳಿಕ ಈ ಹಣ ಯಾರಿಗೆ ಸೇರಿದ್ದು ಹಾಗೂ ಯಾವ ಕಾರಣಕ್ಕೆ ಸಾಗಿಸಲಾಗುತ್ತಿತ್ತು ಎಂಬುದು ತಿಳಿಯಲಿದೆ ಎಂದು ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.