Site icon newsroomkannada.com

ಅಯೋಧ್ಯೆ ರಾಮಮಂದಿರದಲ್ಲಿ ರಾಮಾಯಣದ 6000 ಸಾವಿರ ಶ್ಲೋಕಗಳ ಕೆತ್ತನೆ

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆ ಕುರಿತು ದೇಶದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಪೋಸ್ಟರ್‌ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಿಳಿಸಿದ್ದಾರೆ. 2024 ರ ಜನವರಿಯಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಎಂದು ಅವರು ತಿಳಿಸಿದ್ದು, ಡಿಸೆಂಬರ್ 31 ರೊಳಗೆ ದೇವಾಲಯ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅವರು ಸರಣಿ ಸಭೆ ನಡೆಸುತ್ತಿದ್ದು ಜುಲೈ 22ರಿಂದ ರಾಮಮಂದಿರದ ನೆಲ ಅಂತಸ್ತಿನ 160 ಕಂಬಗಳಲ್ಲಿ ರಾಮಾಯಾಣದ ವಿವಿಧ ಪ್ರಸಂಗ ಕೆತ್ತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದೇವಾಲಯದ ನೆಲ ಅಂತಸ್ತಿನ ಕಂಬಗಳ ಮೇಲೆ ರಾಮಾಯಣದ 6,000 ಶ್ಲೋಕಗಳನ್ನು ಕೆತ್ತಲಾಗುವುದು. ಅಲ್ಲದೆ ರಾಮಾಯಣದ ವಿವಿಧ ಪ್ರಸಂಗಗಳನ್ನು ಹೊಂದಿರುವ ಸುಮಾರು 300 ಕಬ್ಬಿಣದ ಫಲಕಗಳನ್ನು ದೇವಾಲಯದ ಅಂಗಳದಲ್ಲಿ ಅಂಟಿಸಲಾಗುತ್ತದೆ. ಎಂದು ತಿಳಿಸಿದ್ದಾರೆ.

Exit mobile version