ಇಸ್ಲಾಮಾಬಾದ್: ಉಡುಪಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ವೀಡಿಯೋ ಚಿತ್ರೀಕರಣ ಮಾಡಿದ ವಿಚಾರ ಇಡೀ ದೇಶದಲ್ಲಿ ಸುದ್ದಿಯಾಗುತ್ತಿರುವಂತೆಯೇ ಅತ್ತ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದಲ್ಲಿರುವ ಇಸ್ಲಾಮಿಯಾ ವಿಶ್ವವಿದ್ಯಾಲಯದ 5500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಅಶ್ಲೀಲ ವೀಡಿಯೋ ಕ್ಲಿಪ್‌ಗಳು ಪೋರ್ನ್ ಸೈಟ್‌ಗಳಲ್ಲಿ ವೈರಲ್ ಆಗಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ.
ಉತ್ತಮ ಅಂಕ ನೀಡುವುದಾಗಿ ನಗ್ನ ವಿಡಿಯೋ: ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಅವರ ನಗ್ನ ವಿಡಿಯೋಗಳನ್ನು ಮಾಡುತ್ತಿದ್ದ ವಿವಿಯ ಭದ್ರತಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ವಿಶ್ವವಿದ್ಯಾಲಯದ 113 ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಮಾದಕ ವ್ಯಸನಿಗಳು ಎನ್ನುವುದೂ ಪತ್ತೆಯಾಗಿದೆ. ಇವರಿಗೆ ಸ್ವತಃ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಪೊಲೀಸರು ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಅಬುಜರ್, ಭದ್ರತಾ ಅಧಿಕಾರಿ ಸೈಯದ್ ಎಜಾಜ್ ಶಾ ಮತ್ತು ಅಲ್ತಾಫ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಜಾಜ್‌ನ 2 ಫೋನ್‌ಗಳಿಂದ ಪೊಲೀಸರಿಗೆ ಈ ಪೋರ್ನ್ ಕ್ಲಿಪ್‌ಗಳು ಸಿಕ್ಕಿವೆ.
ಸೆಕ್ಸ್ ಪಾರ್ಟಿಗೆ ಒತ್ತಾಯ: ನಗ್ನ ವಿಡಿಯೋ ಪ್ರಕರಣದಲ್ಲಿ ಭದ್ರತಾ ಅಧಿಕಾರಿಯೊಂದಿಗೆ ವಿಶ್ವವಿದ್ಯಾಲಯದ ಇತರ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ, ಅವರು ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದು ಮಾತ್ರವಲ್ಲದೆ, ಅವರ ನಗ್ನ ವಿಡಿಯೋಗಳನ್ನು ಎಜಾಜ್‌ಗೆ ಕಳಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬಹವಾಲ್ಪುರ್ ಇಸ್ಲಾಮಿಯಾ ವಿಶ್ವವಿದ್ಯಾಯದ ಮುಖ್ಯ ಭದ್ರತಾ ಅಧಿಕಾರಿಯಾಗಿರುವ ಸಯ್ಯದ ಎಜಾಜ್ ಹುಸೇನ್ ಶಾನನ್ನು ಬಂಧಿಸಿ ಫೋನ್ ಪರಿಶೀಲಿಸಿದಾಗವಿವಿಯ 5500 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ನಗ್ನ ವಿಡಿಯೋಗಳು ಪತ್ತೆಯಾಗಿದೆ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಉದ್ಯೋಗಿಗಳನ್ನು ನೃತ್ಯ ಮತ್ತು ಸೆಕ್ಸ್ ಪಾರ್ಟಿಗೆ ಒತ್ತಾಯಿಸಲಾಗುತ್ತಿತ್ತು. ಈ ಹುಡುಗಿಯರು ಮತ್ತು ಮಹಿಳಾ ಶಿಕ್ಷಕರನ್ನು ವಿವಿಧ ಸ್ಥಳಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. 11 ವಿದ್ಯಾರ್ಥಿಗಳು ಕೂಡ ದಂಧೆಯ ಭಾಗವಾಗಿದ್ದರು ಅವರ ವಿರುದ್ಧ ಕ್ರಿಮಿನಲ್ ದಾಖಲೆಗಳೂ ಇವೆ.