main logo

32 ವರ್ಷದ ಲೇಡಿ ಇಂಗ್ಲಿಷ್‌ ಟೀಚರ್‌ ಒಟ್ಟಿಗೆ 17 ವರ್ಷದ ವಿದ್ಯಾರ್ಥಿ ಎಸ್ಕೇಪ್‌

32 ವರ್ಷದ ಲೇಡಿ ಇಂಗ್ಲಿಷ್‌ ಟೀಚರ್‌ ಒಟ್ಟಿಗೆ 17 ವರ್ಷದ ವಿದ್ಯಾರ್ಥಿ ಎಸ್ಕೇಪ್‌

ಚೆನ್ನೈ: ಇತ್ತೀಚೆಗೆ ಗೌರವಯುತವಾದ ಶಿಕ್ಷಕ ಹುದ್ದೆ ಕೆಲ ಗುರುಗಳಿಂದಾಗಿ ಗೌರವವನ್ನೆ ಕಳೆದುಕೊಳ್ಳುತ್ತಿದೆ. ಅಂತಹುದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಶಿಕ್ಷಕಿಯೊಬ್ಬಳು 11ನೇ ತರಗತಿಯ ವಿದ್ಯಾರ್ಥಿಯನ್ನು ಪುಸಲಾಯಿಸಿ ಆತನೊಂದಿಗೆ ಎಸ್ಕೇಪ್​ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆರೋಪಿ ಶಿಕ್ಷಕಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಖಾಸಗಿ ಶಾಲೆಯವರು. ಇಬ್ಬರು ಕೊಯಮತ್ತೂರಿಗೆ ಎಸ್ಕೇಪ್​ ಆಗಿದ್ದರು. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ಚೆನ್ನೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಶಿಕ್ಷಕಿ ಇಂಗ್ಲಿಷ್​ ಭಾಷೆಯನ್ನು ಬೋಧಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ ವಾಸವಿದ್ದಳು. ಇತ್ತೀಚೆಗಷ್ಟೇ ತನ್ನ ಶಾಲೆಯ 17 ವರ್ಷದ ವಿದ್ಯಾರ್ಥಿಯ ಜತೆ ಶಿಕ್ಷಕಿ ಸ್ನೇಹ ಬೆಳೆಸಿದ್ದಳು. ಇಬ್ಬರ ಸ್ನೇಹ ವಿವಾಹೇತರ ಸಂಬಂಧಕ್ಕೆ ತಿರುಗಿತ್ತು. ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನು ಪುಸಲಾಯಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಮಂಗಳವಾರ ವಿದ್ಯಾರ್ಥಿ, ಶಾಲೆಯಿಂದ ಮನೆ ಹಿಂತಿರುಗದಿದ್ದಾಗ ಆತಂಕಗೊಂಡ ಪಾಲಕರು ಶಾಲೆಯಲ್ಲಿ ಮಗನ ಬಗ್ಗೆ ವಿಚಾರಿಸಿದ್ದಾರೆ. ನಿಮ್ಮ ಮಗ ಇಂದು ಶಾಲೆಗೆ ಬಂದಿಲ್ಲ ಎಂಬ ಉತ್ತರ ಕೇಳಿ ದಿಗ್ಭ್ರಮೆಗೊಂಡ ಪಾಲಕರು ತಕ್ಷಣ ಚೆನ್ನೈನ ಥಾಲಂಬುರ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸುತ್ತಾರೆ.

ಪೊಲೀಸರು ತನಿಖೆ ಆರಂಭಿಸಿದಾಗ ವಿದ್ಯಾರ್ಥಿ ಶಾಲೆಗೆ ಗೈರಾದ ಅದೇ ದಿನ ಶಿಕ್ಷಕಿ ಗೈರಾಗಿರುವುದು ಕಂಡುಬಂದಿದೆ. ಬಳಿಕ ಇಬ್ಬರ ಮೊಬೈಲ್​ ಟವರ್​ ಲೊಕೇಶನ್​ ಟ್ರ್ಯಾಕ್​ ಮಾಡಿದಾಗ ಕೊಯಮತ್ತೂರಿನ ಕರಮಡೈನಲ್ಲಿ ಪತ್ತೆಯಾಯಿತು. ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ಚೆನ್ನೈಗೆ ವಾಪಸ್​ ಕರೆತಂದರು.

ಶಿಕ್ಷಕಿಯಿಂದ ತನ್ನನ್ನು ಬೇರೆ ಮಾಡಿದರೆ ಸಾಯುವುದಾಗಿ ವಿದ್ಯಾರ್ಥಿ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಶಿಕ್ಷಕಿಯನ್ನು ವಿಚಾರಿಸಿದಾಗ ಪ್ರವಾಸ ಉದ್ದೇಶದಿಂದ ಕರಮಡೈಗೆ ಹೋಗಿದ್ದೆವು ಎಂದು ಹೇಳಿದ್ದಾಳೆ. ಸದ್ಯ ಆಕೆಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

error: Content is protected !!