Site icon newsroomkannada.com

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ 13 ಲಕ್ಷ ರೂ. ವಂಚನೆ

ಮಂಗಳೂರು: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಮಹಿಳೆಗೆ 12.93 ರೂ. ವಂಚಿಸಿರುವ ಬಗ್ಗೆ ವರದಿಯಾಗಿದೆ. ಪುತ್ತೂರು ನಿವಾಸಿ ಝೀನತ್‌ ಬಾನು ಅವರಿಗೆ 2022ನೇ ಮೇ ತಿಂಗಳಿನಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಪ್‌ ಕರೆ ಮಾಡಿ ತಾನು ಕೌನ್‌ ಬನೇಗಾ ಕರೋಡ್‌ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹಾಗೂ 25 ಲಕ್ಷ ರೂ. ಲಾಟರಿ ಗೆದ್ದಿರುವುದಾಗಿ ತಿಳಿಸಿದ್ದಾನೆ. ನಂತರ ಈ ಹಣ ಪಡೆಯಲು ತೆರಿಗೆ ಹಾಗೂ ಇನ್ನಿತರ ಶುಲ್ಕ ಎಂದು ಕಾರಣ ಹೇಳಿ 2022ನೇ ಮೇ ತಿಂಗಳಿನಿಂದ 2023ರ ಸೆ.13ರವರೆಗೆ 12.93 ಲಕ್ಷ ರೂ. ವಂಚಿಸಿರುವುದಾಗಿ ದೂರಲಾಗಿದೆ.

Exit mobile version