ಹೊಸದಿಲ್ಲಿ: ಬಿಪರ್ ಜಾಯ್ ಚಂಡಮಾರುತ ತನ್ನ ಪಥವನ್ನು ಈಶಾನ್ಯದ ಕಡೆಗೆ ಬದಲಾಯಿಸಿದೆ. ಗುಜರಾತ್‌ನ ಜಖೌ ಬಂದರಿನ ಬಳಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶದತ್ತ ಸಾಗಿದೆ. ಮುಂದೆ ಸೌರಾಷ್ಟ್ರ-ಕಚ್ ಪ್ರದೇಶವನ್ನು ದಾಟಲಿದೆ.
ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿಮೀ ವೇಗದಲ್ಲಿದೆ. ಚಂಡಮಾರುತ ಪರಿಣಾಮದಿಂದ ರಾಜಸ್ಥಾನದಲ್ಲಿ ಜೂನ್ 16 ರಂದು ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆರಂಭಿಕ ವರದಿಗಳ ಪ್ರಕಾರ, ಚಂಡಮಾರುತದ ಪರಿಣಾಮದಿಂದ ಗುಜರಾತ್‌ನಲ್ಲಿ ಸುಮಾರು 22 ಜನರು ಗಾಯಗೊಂಡಿದ್ದಾರೆ. ಇನ್ನು 23 ಪ್ರಾಣಿಗಳು ಸಾವನಪ್ಪಿದ್ದು, 524 ಮರಗಳು ಧರೆಗುರುಳಿವೆ. 940 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.