ಲಖನೌ: ಇಲ್ಲೊಬ್ಬ ಆಸಾಮಿ 2 ಹೆಂಡತಿ, 9 ಮಕ್ಕಳು, ಇದರ ಜೊತೆಗೆ 6 ಗರ್ಲ್‌ಫ್ರೆಂಡ್ಸ್ ಇಟ್ಟುಕೊಂಡು ಯಾರಿಗೂ ಯಾವ ಅನುಮಾನವೂ ಬರದಂತೆ ನೋಡಿಕೊಂಡಿದ್ದಾನೆ. ಈತ ಇಷ್ಟೇ ಅಲ್ಲದೆ ನಕಲಿ ನೋಟು ಹಂಚಿಕೆ, ವಿಮೆಯಲ್ಲಿ ಮೋಸ, ಚೈನ್ ಲಿಂಗ್ ವ್ಯವಾಹರದಲ್ಲಿ ಮೋಸ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ.
ಅಜಿತ್ ಮೌರ್ಯ(41 ವರ್ಷ) ಇದೀಗ ಪತ್ನಿ ಜೊತೆಗೆ ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಅರೆಸ್ಟ್ ಆದ ಘಟನೆ ಉತ್ತರ ಪ್ರದೇಶದ ಸರೋಜಿನಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈತ ಕೇವಲ 6ನೇ ಕ್ಲಾಸ್ ಕಲಿತು, ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಶಾರ್ಟ್ ವಿಡಿಯೋ ಮೂಲಕ ಉಪದೇಶಗಳನ್ನು ನೀಡುತ್ತಾ ಭಾರಿ ಜನಪ್ರಿಯನಾಗಿದ್ದಾನೆ. ಹಣ ಡಬಲ್ ಮಾಡುವುದು, ಚೈನ್ ಲಿಂಕ್ ಬ್ಯೂಸಿನೆಸ್, ವಿಮೆ, ನಕಲಿ ನೋಟು ಸೇರಿದಂತೆ ಹಲವು ವ್ಯವಹಾರದಲ್ಲಿ ಹಲವರಿಗೆ ಮೋಸ ಮಾಡಿದ್ದು ಬೆಳಕಿಗೆ ಬಂದಿದೆ. ಈತ 2000ನೇ ಇಸವಿಯಲ್ಲಿ ಮುಂಬೈನಲ್ಲಿ ಸಂಗೀತಾ ಅನ್ನೋ ಮಹಿಳೆಯನ್ನು ವಿವಾಹವಾಗಿದ್ದಾನೆ. 2016ರಲ್ಲಿ ಈತನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ. 2019ರಲ್ಲಿ ಸುಶೀಲಾ ಅನ್ನೋ ಮಹಿಳೆಯನ್ನೂ ಮದುವೆಯಾಗಿದ್ದಾನೆ. ಮೊದಲ ಪತ್ನಿಗೆ 6 ಮಕ್ಕಳು, ಎರಡನೇ ಪತ್ನಿಗೆ 3 ಮಕ್ಕಳ ಕರುಣಿಸಿದ್ದಾನೆ. ಇಬ್ಬರಿಗೂ ಕೋಟಿ ರೂಪಾಯಿ ಮೌಲ್ಯದ ಎರಡು ಪ್ರತ್ಯೇಕ ಮನೆ ಕಟ್ಟಿಸಿಕೊಟ್ಟಿದ್ದಾನೆ. ಇದರ ನಡುವೆ 6 ಗರ್ಲ್‌ಫ್ರೆಂಡ್ಸ್ ಜೊತೆಗೂ ಸಮಯ ಕಳೆಯುತ್ತಿದ್ದ. ಇತ್ತೀಚೆಗೆ ಹಣ ಡಬಲ್ ಮಾಡುವುದಾಗಿ ಧರ್ಮೆಂದ್ರ ಕುಮಾರ್ ಅನ್ನೋ ವ್ಯಕ್ತಿಗೆ 3 ಲಕ್ಷ ರೂಪಾಯಿ ವಂಚಿಸಿದ್ದು. ಈ ಕುರಿತು ಪ್ರಕರಣ ದಾಖಲಾಗಿತ್ತು. ಹೀಗಾಗಿ ಈತನ ಹಿಂದೆ ಬಿದ್ದಿದ್ದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಈಗಾಗಗಲೇ ಹಲವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿರುವುದು ಪತ್ತೆಯಾಗಿದೆ.