ವಾಶಿಂಗ್ಟನ್ : ಅಮೆರಿಕದ ವಾಶಿಂಗ್ಟನ್‌ನಲ್ಲಿ 18 ವರ್ಷದ ಪುತ್ರ ಕಾಡಿ ಬೇಡಿ ರಗ್ಬಿ ಆಟಕ್ಕೆ ಸೇರಿಕೊಂಡಿದ್ದ. ದುಬಾರಿ ಫೀಸ್ ಹೊಂದಿಸುವುದು ತಾಯಿಗೆ ಪ್ರಯಾಸ ವಾಗಿದ್ದರು ಮಗನ ಲೈಫ್ ಚೆನ್ನಾಗಿ ಇರಲೆಂದು ಕಳುಹಿಸಿದ್ದರು. ಆರಂಭಿಕ ದಿನದಲ್ಲಿ ಪ್ರತಿ ದಿನ ಸಂಜೆ ರಗ್ಬಿ ಅಭ್ಯಾಸಕ್ಕೆ ತೆರಳುತ್ತಿದ್ದ ಪುತ್ರ, ಬಳಿಕ ಒಂದೊಂದು ದಿನ ನಾಪತ್ತೆಯಾಗುತ್ತಿದ್ದ. ಬರುಬರುತ್ತಾ ಅಭ್ಯಾಸಕ್ಕೆ ಚಕ್ಕರ್ ಹಾಕುವುದು ನಿರಂತರವಾಗಿತ್ತು. ಹೀಗಾಗಿ ರಗ್ಬಿ ಕೋಚ್ ನೇರವಾಗಿ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಆರಂಭಿಕ ದಿನಗಳಲ್ಲಿ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದ ತಾಯಿ, ಪದೇ ಪದೇ ದೂರು ಕೇಳಿಬಂದಾಗ ಪುತ್ರ ಅಭ್ಯಾಸಕ್ಕೆಂದು ತೆರಳಿ ಎಲ್ಲಿಗೆ ಹೋಗುತ್ತಿದ್ದಾನೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಪತ್ತೆ ಹಚ್ಚುವ ಕಾರ್ಯಕ್ಕೆ ಕುಟುಂಬ 2008ರಲ್ಲಿ ಅಭಿವೃದ್ಧಿಪಡಿಸಿದ ಆಯಪ್ ನೆರವು ಪಡೆದಿದ್ದಾಳೆ.2008ರಲ್ಲಿ ಈ ಕುಟುಂಬದ ಸಾಫ್ಟ್‌ವೇರ್ ಎಂಜಿನಿಯರ್ಸ್ ಕುಟುಂಬಸ್ಥರಿಗೆ ಆಯಪ್ ಅಭಿವೃದ್ಧಿಪಡಿಸಲಾಗಿತ್ತು. ಈ ಆಯಪ್ ಮೂಲಕ ಕುಟುಂಬದ ಸದಸ್ಯರು ಎಲ್ಲಿದ್ದಾರೆ ಅನ್ನೋ ಮಾಹಿತಿ ನಿಖರವಾಗಿ ಹೇಳಲಿದೆ. ಇಷ್ಟೇ ಅಲ್ಲ ಕುಟುಂಬದ ಜೊತೆಗೆ ಸಂಪರ್ಕ, ಮೆಸೆಜ್ ,ಡೇಟಾ ಶೇರಿಂಗ್, ಫೈಲ್ಟ್ರಾನ್ಸ್‌ಫರ್ ಸೇರಿದಂತೆ ಹಲವು ಇತರ ಫೀಚರ್ಸ್ ಕೂಡ ಇದೆ.
ಇದರ ಮೂಲಕ ಪುತ್ರ ಎಲ್ಲಿದ್ದಾನೆ ಅನ್ನೋ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಪುತ್ರನ ಲೋಕೇಶನ್ ಪಾರ್ಕ್ ರೋಡ್ ಎಂದು ತೋರಿಸಿತ್ತು. ತಕ್ಷಣವೇ ಪಾರ್ಕ್ ರೋಡ್‌ಗೆ ತೆರಳಿದ ತಾಯಿಗೆ ಆಘಾತವಾಗಿದೆ. ಪಾರ್ಕ್ ರೋಡ್ ಬಳಿ ನಿಲ್ಲಿಸಿದ ಕಾರಿನಲ್ಲಿ 26 ವರ್ಷದ ಸೌಥ್‌ಮೆಕ್ಲೆನಬರ್ಗ್ ಹೈಸ್ಕೂಲ್ ಟೀಚರ್ ಗೆಬ್ರಿಯೆಲಾ ಕಾರ್ತಾಯ ನ್ಯೂಫೆಲ್ಡ್ ಜೊತೆ ಸೆಕ್ಸ್‌ನಲ್ಲಿ ತೊಡಗಿಕೊಂಡಿದ್ದ. ರೆಡ್‌ಹ್ಯಾಂಡ್ ಆಗಿ ಪುತ್ರನ ಹಿಡಿದ ತಾಯಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ.