ಮಂಗಳೂರು: ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ಭಂಡಾರಿ ಸೋಲಿಟೇರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ 15ನೇ ವಾರ್ಷಿಕ ಸಂಭ್ರಮವು ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿತು.
ಸಮಾರಂಭದ ಪ್ರಧಾನ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ್ ಕಾಮತ್ ವಹಿಸಿದ್ದರು, ಮೇಯರ್ ಜಯಾನಂದ ಅಂಚನ್ ದೀಪ ಪ್ರಜ್ವಲನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕ್ಯಾಪ್ಟನ್ ಬ್ರಿಜೇಶ್ ಚೌಟ, ಮನಪಾ ಕಾರ್ಪೋರೇಟರ್ ಮನೋಹರ್ ಶೆಟ್ಟಿ, ಕದ್ರಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ಕದ್ರಿ, ಕರ್ನಾಟಕ ತುಳು ಸಾಹಿತ್ಯ ಅಕಡೆಮಿ ಮಾಜಿ ಸದಸ್ಯ ಮೋಹನ್ ಕೊಪ್ಪಳ, ಲಯನ್ಸ್ ಕ್ಲಬ್ ಕಾವೇರಿ, ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಉಷಾ ಪ್ರಭಾಕರ್, ಸಂಘದ ಗೌರವಾಧ್ಯಕ್ಷ ರಾಘವ ಕೆ. ಅಧ್ಯಕ್ಷ ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ನಿರಂಜನ್ ಕೆ. ಸಾಲಿಯಾನ್, ಕೋಶಾಧಿಕಾರಿ ಗೋಪುರಗುಂಡಿ ಮತ್ತು ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟಿ ಕುಮಾರಿ ಸಪ್ತಾ ಪಾವೂರು ಇವರನ್ನು ಸನ್ಮಾನಿಸಲಾಯಿತು ಹಾಗೂ ಸಂಘದ ಸದಸ್ಯರಿಂದ ‘ತ್ರಿಪುರಾರಿ ಶಂಭೋ ಶಂಕರ ಹರ ಹರ ಮಹಾದೇವ’ ರೂಪಕ ಪ್ರದರ್ಶನಗೊಂಡಿತು.