main logo

ಬಸ್‌ನಲ್ಲಿ ಫುಟ್ ಬೋರ್ಡ್ ಪ್ರಯಾಣದ ವಿರುದ್ಧ ಪೊಲೀಸ್ ಕಾರ್ಯಾಚರಣೆ – 123 ಕೇಸ್ ದಾಖಲು

ಬಸ್‌ನಲ್ಲಿ ಫುಟ್ ಬೋರ್ಡ್ ಪ್ರಯಾಣದ ವಿರುದ್ಧ ಪೊಲೀಸ್ ಕಾರ್ಯಾಚರಣೆ – 123 ಕೇಸ್ ದಾಖಲು

ಮಂಗಳೂರು: ಕಂಡಕ್ಟರ್ ಓರ್ವನು ಸಂಚರಿಸುತ್ತಿದ್ದ ಸಿಟಿ ಬಸ್‌ನಿಂದ ಏಕಾಏಕಿ ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಬೆನ್ನಲ್ಲೇ ಪೊಲೀಸರು ನಗರದ ಸಿಟಿ ಬಸ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಫುಟ್‌ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಲ್ಲದೆ ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬಾಗಿಲು ಹೊಂದಿದ ಬಸ್‌ಗಳು ಇನ್ನು ಮುಂದೆ ಕಟ್ಟುನಿಟ್ಟಾಗಿ ಬಸ್ ಸಂಚಾರದಲ್ಲಿರುವ ವೇಳೆಗೆ ಬಾಗಿಲುಗಳನ್ನು ಸರಿಯಾಗಿ ಮುಚ್ಚುವಂತೆ ನೋಡಿಕೊಳ್ಳಬೇಕು. ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್‌ಗಳು ಫುಟ್‌ಬೋರ್ಡ್ ಖಾಲಿಯಾಗುವವರೆಗೆ ಬಸ್ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರದಲ್ಲಿ ನಡೆದ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್‌ಬೋರ್ಡ್‌ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಸಂಚರಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!