ಬೆಂಗಳೂರು: ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಪರಸ್ಪರ ವಾಕ್ಸಮರ ನಡೆದಿತ್ತು. ಸರ್ಕಾರದ ನಡೆಯನ್ನು ವಿಪಕ್ಷಗಳು ತೀಕ್ಷ್ಣವಾಗಿ ಖಂಡಿಸಿದವು. ಬಿಜೆಪಿ ಸದಸ್ಯರು ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಶಾಸಕರ ವರ್ತನೆ ವಿರುದ್ಧ ಕಾಂಗ್ರೆಸ್ ಶಾಸಕರು ಸ್ಪೀಕರ್‌ಗೆ ದೂರು ನೀಡಿದ್ದಾರೆ.
ಸದನದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸ್ಪೀಕರ್ ಬಿಜೆಪಿಯ ಹತ್ತು ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಶಾಸಕರಾದ ಆರ್. ಅಶೋಕ್, ಯಶಪಾಲ್ ಸುವರ್ಣ, ಉಮಾನಾಥ ಕೋಟ್ಯಾನ್, ಅರವಿಂದ್ ಬೆಲ್ಲದ್, ಧೀರಜ್ ಮುನಿರಾಜ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜ್ಞಾನೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ಅಮಾನತ್ತು ಆದ ಶಾಸಕರು ಹೊರ ಹೋಗಲು ವಿರೋಧಪಡಿಸಿದಾಗ ವಿಧಾನಸಭೆಯ ಮಾರ್ಷಲ್‌ಗಳು ಹೊತ್ತು ಹೊರ ಹಾಕಿದರು.