ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದೀಗ ಈಜಿಪ್ಟ್ನತ್ತ ತೆರಳಿದ್ದಾರೆ. ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.
ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್ನಲ್ಲಿ ಎನ್ಆರ್ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟಿ ಮತ್ತು ಗಾಯಕಿ 38 ವರ್ಷದ ಮೇರಿ ಮಿಲ್ಬೆನ್ ಅವರು ಭಾರತೀಯ ರಾಷ್ಟ್ರಗೀತೆ ‘ಜನ ಗಣ ಮನ’ ಗೀತೆಯನ್ನು ಮನಮೋಹಕವಾಗಿ ಹಾಡಿದರು. ಈ ವೇಳೆ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ ನಂತರ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.
ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಮಿಲ್ಬೆನ್ ಓಂ ಜೈ ಜಗದೀಶ್ ಹರೆ ಹಾಡನ್ನೂ ಕೂಡ ಹಾಡಿದ್ದು, ಮೇರಿ ಮಿಲ್ಬೆನ್ ಅವರ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ನಂತರ ಮೇರಿ ಮಿಲ್ಬೆನ್ ಬಂದು ಪ್ರಧಾನಿ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದರು. ಮೇರಿ ಮಿಲ್ಬೆನ್ ಅವರ ಪಾದಗಳನ್ನು ಮುಟ್ಟುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ ಅವರನ್ನು ತಡೆದು ಹಸ್ತಲಾಘವ ಮಾಡಿದರು.
A night I will treasure forever.
Thank you Prime Minister @narendramodi for your kindness and warmth. An honor to sing for you. Thank you @DDNewslive for airing. India and Indian communities across the world, I love you! God bless the #USIndia alliance. #ModiInUS #PMModiUSVisit https://t.co/FosSOtjL87— Mary Millben (@MaryMillben) June 24, 2023