Site icon newsroomkannada.com

ಪಕ್ಷಕ್ಕೆ ಡ್ಯಾಮೇಜ್‌ ಆಗುವ ಹೇಳಿಕೆ: ರೇಣುಕಾಚಾರ್ಯ, ಯತ್ನಾಳ್‌ಗೆ ನೋಟಿಸ್‌

ಬೆಂಗಳೂರು: ಬಿಜೆಪಿ ನಾಯಕರು ಬಹಿರಂಗವಾಗಿ ಪಕ್ಷಕ್ಕೆ ಧಕ್ಕೆ ತರುವಂತಹ ಹೇಳಿಕೆ ಹಿನ್ನೆಲೆ ಪಕ್ಷದ ರಾಜ್ಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಕೆಲವರಿಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್‌ ಜಾರಿ ಮಾಡಿದೆ.

ಪಕ್ಷದ ನಾಯಕರ ಹೆಸರು ಉಲ್ಲೇಖಿಸದೇ ಮಾಜಿ ಶಾಸಕ, ಸಚಿವ ಎಂಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿ ಪಕ್ಷದ ಕಚೇರಿ ಕಾರ್ಪೊರೇಟ್ ಕಚೇರಿಯಂತಾಗಿದೆ. ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸುವತ್ತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ನಂತರ ಬಿಜೆಪಿ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು ಎಂದೂ ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಪಕ್ಷದ ಬಗ್ಗೆ ಗೌರವವಿದ್ದು, ಆದರೆ ಪಕ್ಷದ ನಾಯಕರು ಆಂತರಿಕವಾಗಿ ಎಲ್ಲವನ್ನೂ ಸರಿಪಡಿಸಬೇಕು ಎಂದು ಹೇಳಿದ್ದಾರೆ. ರಾಜ್ಯ, ಕೇಂದ್ರಗಳಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ದರು.

ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹೆಸರನ್ನು ಉಲ್ಲೇಖಿಸದೇ ಕೆಲವು ನಾಯಕರಿಗೆ ಸರ್ವಾಧಿಕಾರಿ ಧೋರಣೆಯನ್ನು ಬಿಡುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಚುನಾವಣೆಗೆ 4 ದಿನಗಳ ಮುನ್ನ ನಾಯಕರು ಆನ್ ಲೈನ್ ಸಭೆಗಳು, ವರ್ಚ್ಯುಯಲ್ ರ್ಯಾಲಿಗಳನ್ನು ನಡೆಸಿದ್ದರು. ನಾಯಕರ ಮುಖ ನೋಡಿಯೇ ಕಾರ್ಯಕರ್ತರು ಸುಸ್ತಾಗಿದ್ದರು ಎಂದು ಹೇಳಿದ ರೇಣುಕಾಚಾರ್ಯಗೆ ನಾಯಕರ ಹೆಸರು ಉಲ್ಲೇಖಿಸುವಂತೆ ಒತ್ತಾಯಿಸಿದಾಗ, ಸಂದರ್ಭ ಬಂದಾಗ ಹೆಸರು ಹೇಳುವುದಾಗಿ ತಿಳಿಸಿದ್ದಾರೆ.

Exit mobile version