Site icon newsroomkannada.com

ಕೇರಳದ ಪ್ರಸಿದ್ಧ ನಟಿ ಮನೆ ಮೇಲೆ ಐಟಿ ದಾಳಿ: ಇದರ ಹಿಂದಿದೆ ರಾಜ ರಹಸ್ಯ

ಕೊಚ್ಚಿ: ಕೇರಳದಲ್ಲಿ ಐಟಿ ಅಧಿಕಾರಿಗಳು ಯೂಟ್ಯೂಬರ್ಸ್ ಮನೆ ಮೇಲೆ ದಾಳಿ ಮಾಡಿದ್ದು, ತೆರಿಗೆ ಕಟ್ಟದ ಯೂಟ್ಯೂಬರ್ಸ್ ಗೆ ಚಳಿ ಬಿಡಿಸಿದ್ದಾರೆ.ಈ ವೇಳೆ ಕೆಲವರಿಗೆ ನೋಟಿಸ್ ಕೂಡ ನೀಡಿದ್ದಾರೆ ಎನ್ನಲಾಗಿದೆ. ಈ ಯೂಟ್ಯೂಬರ್ಸ್ ಗಳಲ್ಲಿ ನಟಿ ಪರ್ಲಿ ಮಾನಿ ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಐಟಿ ಅಧಿಕಾರಿಗಳು ರಾಜ್ಯದ 13 ಯೂಟ್ಯೂಬರ್ಸ್​ ಮನೆ ಮತ್ತು ಕಚೇರಿಗಳನ್ನು ಮಾತ್ರ ಪರಿಶೀಲಿಸಿದ್ದು,ಇದರಲ್ಲಿ ನಟಿ ಪರ್ಲಿ ಮಾನಿ ಕೂಡ ಇದ್ದಾರೆ. ಐಟಿ ಇಲಾಖೆಯು ತನ್ನ ತೆರಿಗೆ ತಪಾಸಣೆಯನ್ನು ರಾಜ್ಯದ ಹೆಚ್ಚಿನ ಯೂಟ್ಯೂಬರ್ಸ್​ಗೆ ವಿಸ್ತರಿಸುವ ಸುಳಿವು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳದ ಐಟಿ ಅಧಿಕಾರಿಗಳು ನಿನ್ನೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಕೇರಳದ ಪ್ರಸಿದ್ಧ ಯೂಟ್ಯೂಬರ್ಸ್ ಗಳನ್ನು ಬೆಚ್ಚಿ ಬೀಳಿಸಿದ್ದಾರೆ.ಐಟಿ ಇಲಾಖೆಯ ಅಧಿಕಾರಿಗಳು, ನಟಿ ಮತ್ತು ಆಂಕರ್ ಪರ್ಲೆ ಮಾನಿ, ಫಿಶಿಂಗ್ ಫ್ರೀಕ್ಸ್ (ಸೆಬಿನ್), ಎಂ4ಟೆಕ್, ಆರ್ಜ್ಯೂ, ಕಾಲ್ಮೆಶಜ್ಜಮ್, ಅಖಿಲ್ ಎನ್‌ಆರ್‌ಡಿ, ಜಯರಾಜ್ ಜಿ ನಾಥ್, ಅನ್‌ಬಾಕ್ಸಿಂಗ್ ಡ್ಯೂಡ್, ರೈಸಿಂಗ್ ಸ್ಟಾರ್, ಈಗಲ್ ಗೇಮಿಂಗ್ ಮತ್ತು ಕಾಜ್ಟ್ರೋ ಗೇಮಿಂಗ್ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿ ನಡೆಸಿದರು.

ಈ ಸಂದರ್ಭ ಅಧಿಕಾರಿಗಳು ಪರಿಶೀಲನೆ ಮಾಡಿರುವ ಪ್ರಸಿದ್ಧರ ಪೈಕಿ ನಟಿ ಪರ್ಲಿ ಮಾನಿ ಮನೆ ಕೂಡ ಇದೆ. ಪರ್ಲಿ ಕೇರಳದ ಪ್ರಸಿದ್ದ ನಟಿ, ನಿರೂಪಕಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.

Exit mobile version