ಬೆಳ್ತಂಗಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣಾರ್ಭಟ ತೀವ್ರಗೊಂಡಿದೆ. ಕರಾವಳಿಯಿಂದ ಮಲೆನಾಡು ಸೇರಿದಂತೆ ಘಟ್ಟ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟಿ ರಸ್ತೆಗೆ ಗುಡ್ಡ ಕುಸಿದು ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಳೆಯ ಅಬ್ಬರಕ್ಕೆ ಚಾರ್ಮಾಡಿ ಘಾಟಿ ರಸ್ತೆಯ ಆಲೆಕಾನ್ ಮತ್ತು ಬಿದಿರುತಳ ಮಧ್ಯದಲ್ಲಿ ರಸ್ತೆಗೆ ಮಣ್ಣು ಕುಸಿದಿದೆ. ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಇದೀಗ ಮಳೆಯಿಂದ ಘಾಟಿಯಲ್ಲಿ ಮಣ್ಣು ಕುಸಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

- 24 July 2023
0
Less than a minute
Related Articles
prev
next