Site icon newsroomkannada.com

ಆಟೋ ಚಾಲಕನ ಖಾತೆಗೆ ಬಂತು 9000 ಸಾವಿರ ಕೋಟಿ ರೂ.: ಆತ ಹಣ ಇಟ್ಕೊಂಡು ಮಾಡಿದ್ದೇನು ಗೊತ್ತಾ?

ಚೆನ್ನೈ: ಡಿಜಿಟಲ್.. ಡಿಜಿಟಲ್​​ ಎಂದು ಹೆಚ್ಚಾಗಿ ಅದಕ್ಕೆ ಒಗ್ಗಿಕೊಂಡರೆ ಇಂತಹ ಘಟನೆಗಳು ಆಗುವುದು ಖಂಡಿತ. ಬ್ಯಾಂಕ್​​ನ ಎಡವಟ್ಟಿನಿಂದ ವ್ಯಕ್ತಿಯೊಬ್ಬರ ಖಾತೆಗೆ 9,000 ಕೋಟಿ ರೂ. ತಪ್ಪಾಗಿ ಜಮೆಯಾಗಿದೆ. ತಮಿಳುನಾಡಿನ ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್‌ಕುಮಾರ್ ಎಂಬ ಆಟೋ ಚಾಲಕನ ಖಾತೆಗೆ ಬ್ಯಾಂಕ್​​ನಿಂದ 9,000 ಕೋಟಿ ರೂ. ಬಂದಿದೆ. ಹಣ ಕ್ರೆಡಿಟ್​​ ಆಗಿರುವ ಬಗ್ಗೆ ಆತನ ಫೋನ್​​ಗೆ ಎಸ್‌ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್​​​ಎಂದುಕೊಂಡಿದ್ದರು, ಆದರೆ ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಗಾಬರಿಯಾಗಿದ್ದಾರೆ.

ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್​​ನಿಂದ ಆಟೋ ಚಾಲಕನ ಖಾತೆಗೆ 9,000 ಕೋಟಿ ರೂಪಾಯಿ ಜಮಾ ಮಾಡಿರುವ ಸಂದೇಶವನ್ನು ಕಳುಹಿಸಿದ್ದಾರೆ. ಈ ಹಣ ಬರುವ ಮೊದಲು ಆತನ ಖಾತೆಯಲ್ಲಿ 105 ರೂ. ಮಾತ್ರ ಇತ್ತು ಎಂದು ಹೇಳಲಾಗಿದೆ.

9,000 ಕೋಟಿ ರೂಪಾಯಿ ಜಮಾಯಾದ 30 ನಿಮಿಷದಲ್ಲಿ ಮತ್ತೆ ಆ ಹಣವನ್ನು ಹಿಂಪಡೆದಿದ್ದಾರೆ. ಆದರೆ ಆಟೋ ಚಾಲಕ 9,000 ಕೋಟಿಯಲ್ಲಿ 21 ಸಾವಿರ ರೂ.ವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾರೆ. ಮರುದಿನ ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳು ಬಂದು ತಪ್ಪಾಗಿ ಬಂದಿರುವ ಹಣದ ಬಗ್ಗೆ ತಿಳಿಸಿದ್ದಾರೆ. ಖರ್ಚು ಮಾಡಿದ ಹಣವನ್ನು ಹಿಂಪಡೆಯದಂತೆ ರಾಜ್‌ಕುಮಾರ್‌ ಮನವಿ ಮಾಡಿದ್ದಾರೆ. ಬಳಿಕ ಎರಡು ಕಡೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Exit mobile version