ಎಗ್ ಯಾರಿಗೆ ಇಷ್ಟ ಇಲ್ಲ ಹೇಳಿ. ನಾನ್ವೆಜ್ ಪ್ರೀಯರು ತುಂಬ ಇಷ್ಟ ಪಟ್ಟು ತಿನ್ನುವ ರೆಸಿಪಿಯಲ್ಲಿ ಎಗ್ ರೆಸಿಪಿ ಮೊದಲನೆಯದು ಎಂದರೆ ತಪ್ಪಾಗಲಾರದು. ಇಂದು ನಾವು ಎಗ್ ಬುರ್ಜಿ ಮಾಡೋದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದನ್ನು ಮಾಡಲು ತುಂಬಾನೆ ಕಡಿಮೆ ಸಮಯ ಸಾಕು.
ಎಗ್ ಬುರ್ಜಿ ಮಾಡಲು, ಮೊದಲಿಗೆ ಒಂದು ಬಾಣಲೆಗೆ ತೆಂಗಿನ ಎಣ್ಣೆ ಮೂರರಿಂದ ನಾಲ್ಕು ಚಮಚ ಹಾಕಿ ಅದಕ್ಕೆ ಸಣ್ಣದಾಗಿ ಕತ್ತರಿಸಿಟ್ಟ ಈರುಳ್ಳಿ (ಎರಡರಿಂದ ಮೂರು) ಹಾಕಿ ಎರಡರಿಂದ ಮೂರು ಹಸಿಮೆಣಸು ಚಿಕ್ಕದ್ದಾಗಿ ಕತ್ತರಿಸಿ ಹಾಕಿ ಸ್ವಲ್ಪ ಹೊತ್ತು ಉರಿಯಲು ಬಿಟ್ಟು, ನಂತರ ಅದಕ್ಕೆ ಒಂದು ಸಣ್ಣ ಟೊಮೆಟೊವನ್ನು ಕತ್ತರಿಸಿ ಹಾಕಿ.
ನಂತರ ಖಾರದಪುಡಿ, ಧನಿಯಾ ಪುಡಿ, ಚಿಟಿಕೆ ಅರಿಶಿನ, ಸ್ವಲ್ಪ ಉಪ್ಪು,ಗರಂ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಮೊಟ್ಟೆ ಹೊಡೆದು ಅದಕ್ಕೆ ಹಾಕಿ ಮೂರರಿಂದ ನಾಲ್ಕು ನಿಮಿಷ ಹಾಗೆ ಬಿಡಿ. ನಿಮಗೆ ಬೇಕಿದ್ದರೆ ಕೊತ್ತಂಬರಿ ಸೊಪ್ಪು ಹಾಕಿ. ಈಗ ಎಗ್ ಬುರ್ಜಿ ರೆಡಿ.