Site icon newsroomkannada.com

ಉಡುಪಿ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗ್ರಹ

ಮಂಗಳೂರು: ಉಡುಪಿ ಖಾಸಗಿ ಹಾಸ್ಪಿಟಲ್ ನಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ನಿಖಿತಾ ಸಾವು ತೀವ್ರ ಗೊಂದಲಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ಖಂಡಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮಂಗಳೂರಿನ ಕೆಪಿಟಿ ಘಟಕದ ವತಿಯಿಂದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಎಬಿವಿಪಿ ವಿದ್ಯಾರ್ಥಿ ಮುಖಂಡರು ಒಂದು ವಾರದೊಳಗಾಗಿ ಉನ್ನತ ಮಟ್ಟಿನ ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಶಿಕ್ಷೆ ಆಗಬೇಕು. ಮನೆಯವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕುಟುಂಬ ಸದಸ್ಯರೊಂದಿಗೆ ನಾವಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಸಂದರ್ಭದಲ್ಲಿ ನಿಶಾನ್ ಆಳ್ವ, ಆದಿತ್ಯ ಶೆಟ್ಟಿ, ಶ್ರಿಪಾದ್ ತಂತ್ರಿ, ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು ಮೃತರಾದ ನಿಖಿತಾಳ ಅತ್ತೆ ನಳಿನಿ ಹಾಗೂ ಚಿಕ್ಕಪ್ಪ ರತ್ನಾಕರ ಹಾಗೂ ಚಿಕ್ಕಪ್ಪನ ಪುತ್ರಿ ಸ್ವಾತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Exit mobile version